ನ್ಯೂಸ್ ನಾಟೌಟ್ : ಭಾರತ ಮೂಲದ ಆರು ವರ್ಷದ ಬಾಲಕನೊಬ್ಬ ಜಗತ್ತಿನ ಅತ್ಯಂತ ಎತ್ತರದ ಮೌಂಟ್ ಎವರೆಷ್ಟ್ ಶಿಖರ ಏರಿ ಹರಸಾಹಸ ಮಾಡಿದ್ದಾನೆ. ಈ ಸುದ್ದಿಯು ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶಾದ್ಯಂತ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಭಾರತ ಮೂಲ ಮಯೂರ ಗಾರ್ಗ್ ಮತ್ತು ಗಾಯತ್ರಿ ದಂಪತಿಗಳ ಪುತ್ರ ಓ ಮದನ್ ಗಾರ್ಗ್ (೬ ವ) ಸತತ ಕಳೆದ ಅಕ್ಟೋಬರ್ ನಲ್ಲಿ ತನ್ನಯ ಪೋಷಕರೊಂದಿಗೆ ಪರ್ವತಾರೋಹಣ ಆರಂಭಿಸಿದ್ದರು .೧೦ ದಿನಗಳಲ್ಲಿ ೬೫ ಕಿ. ಮೀ. ಟ್ರೆಕ್ಕಿಂಗ್ ಮಾಡಿ , ೫೩೬೪ ಮೀಟರ್ ಎತ್ತರದಲ್ಲಿರುವ ನೇಪಾಳದ ಮೌಂಟ್ ಎವರೆಷ್ಟ್ ದಕ್ಷಿಣ ಬೇಸ್ ಕ್ಯಾಂಪ್ ತಲುಪಿದ್ದರು. ಇದು ಸಿಂಗಾಪುರ ಬುಕ್ ಆಫ್ ರೆಕಾಡ್ಸ್ ನಲ್ಲಿ ದಾಖಲಾಗಿದೆ. ಓ ಮದನ್ ಗೆ ಎರಡೂವರೆ ವರ್ಷ ವಿರುವಾಗಲೇ ಆತನನ್ನು ಪೋಷಕರು ವಿಯೆಟ್ನಾಂ, ಥಾಯ್ಲೆಂಡ್, ಲಾವೋಸ್ ಗೆ ಪ್ರವಾಸಕ್ಕೆ ಕರೆದೊಯ್ದಿದ್ದರು. ಪರ್ವತಾರೋಹಣ ತರಬೇತಿ ಕೂಡ ಹೇಳಿಕೊಟ್ಟಿದ್ದರು.


















