ನ್ಯೂಸ್ ನಾಟೌಟ್ : ಒಂದು ಗಂಡಿಗೆ ಒಂದು ಹೆಣ್ಣು. ಇದು ದೇಶದ ಕಾನೂನು. ಆದರೆ ಇಲ್ಲೊಬ್ಬ ವರ ಇಬ್ಬರು ಅವಳಿ ಸಹೋದರಿಯರನ್ನು ಮದುವೆಯಾಗಿ ಇದೀಗ ಕಂಬಿ ಎಣಿಸುವುದಕ್ಕೆ ಸಿದ್ಧವಾಗಿದ್ದಾನೆ. ಈ ಈಟನೆ ಸೊಲಾಪುರದಲ್ಲಿ ನಡೆದಿದೆ. ಫೋಟೋ ವೈರಲ್ ಆಗುತ್ತಿದ್ದಂತೆ ವರನ ವಿರುದ್ಧ ಪ್ರಕರಣ ದಾಖಲಾಗಿದೆ.
ಅವಳಿ ಸಹೋದರಿಯರು ವೃತ್ತಿ ನಿರತ ಐಟಿ ಉದ್ಯೋಗಿಗಳು. ಪಿಂಕಿ-ರಿಂಕಿ ಚಿಕ್ಕವಯಸ್ಸಿನಿಂದಲೂ ಒಂದೇ ಮನೆಯಲ್ಲಿ ಹುಟ್ಟಿಬೆಳೆದವರು. ಸಹೋದರಿಯರ ತಂದೆ ತೀರಿಕೊಂಡ ಮೇಲೆ ತಾಯಿ ಜೊತೆ ವಾಸವಾಗಿದ್ದರು. ತಾಯಿಗೆ ದಿಢೀರ್ ಅನಾರೋಗ್ಯ ಹಿನ್ನಲೆಯಲ್ಲಿ ಅತುಲ್ ಸಹಾಯಕನಾಗಿದ್ದ. ಅಲ್ಲಿಂದ ಅವಳಿ ಸಹೋದರಯರ ಜೊತೆ ಸ್ನೇಹ ಬೆಳೆದುಕೊಂಡಿತ್ತು. ಇದೀಗ ಒಬ್ಬರೊಬ್ಬರನ್ನು ಬಿಟ್ಟು ಇರಲು ಆಗುವುದಿಲ್ಲ,ಎಂಬ ಕಾರಣಕ್ಕೆ ಸಹೋದರಿಯರು ಅತುಲ್ ನನ್ನು ಮದುವೆಯಾಗಿದ್ದಾರೆ. ಈ ಜೋಡಿಯ ವಿವಾಹ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕ್ಲುಜ್ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ಭಾರತೀಯ ದಂಡ ಸಂಹಿತೆ ೪೯೪ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.


















