ನ್ಯೂಸ್ ನಾಟೌಟ್ : ಆರ್ಥಿಕವಾಗಿ ನೀವು ಶ್ರೀಮಂತರಾಗಿದ್ದೂ, ಬಡವರಿಗೆ ನೀಡುವ ಬಿಪಿಎಲ್ (ಪಡಿತರ ಕಾರ್ಡ್) ಕಾರ್ಡ್ ಅನ್ನು ಬಳಸಿಕೊಂಡು ರೇಷನ್ ತಗೋತಿದ್ದೀರಾ ? ಹಾಗಾದ್ರೆ ನಿಮಗೆ ಬಡ್ಡಿ ಸಹಿತ ದಂಡ ಬೀಳುವುದು ಖಚಿತ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿಯೇ ಹಲವಾರು ಮಂದಿಯ ಕಾರ್ಡ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಾತ್ರವಲ್ಲ ಅವರಿಂದ ಭಾರಿ ದಂಡವನ್ನೂ ಕಕ್ಕಿಸಲಾಗಿದೆ.
ಇದೀಗ ಅಕ್ರಮ ಕಾರ್ಡ್ ಪತ್ತೆಗಾಗಿ ಆಹಾರ ಇಲಾಖೆ ಅಧಿಕಾರಿಗಳು ಮನೆಮನೆ ಭೇಟಿ ನೀಡಿ ಶೋಧ ಕಾರ್ಯ ಆರಂಭಿಸಿದ್ದಾರೆ. ಅಕ್ರಮವಾಗಿ ಕಾರ್ಡ್ ಪಡೆದು ರೇಷನ್ ಪಡೆಯುತ್ತಿದ್ದ ಆರ್ಥಿಕ ಸ್ಥಿತಿವಂತರೂ ಕ್ರಿಮಿನಲ್ ಪ್ರಕರಣಕ್ಕೆ ಹೆದರಿ ಕಳೆದ ಆರು ತಿಂಗಳಿನಲ್ಲಿ 61,919 ಬಿಪಿಎಲ್ ಮತ್ತು 1,658 ಅಂತ್ಯೋದಯ ಸೇರಿ ಒಟ್ಟು 63,577 ಪಡಿತರ ಕಾರ್ಡ್ ಗಳನ್ನು ವಾಪಸ್ ಮಾಡಿದ್ದಾರೆ. 2020ರ ಜ.31ರೊಳಗೆ ಆಯಾ ತಾಲೂಕು ಕಚೇರಿಗೆ ಕಾರ್ಡ್ ಗಳನ್ನು ವಾಪಸ್ ಕೊಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಇನ್ನೂ ಬಹುತೇಕರು ಕಾರ್ಡ್ ಗಳನ್ನು ವಾಪಸ್ ಮಾಡಿಲ್ಲ. ಹೀಗಾಗಿ ಫೆ.1ರಿಂದ ಅಧಿಕಾರಿಗಳು ಅಕ್ರಮ ಕಾರ್ಡ್ ಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಅಕ್ರಮ ಕಾರ್ಡ್ ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಮಂಗಳೂರು ಒಂದರಲ್ಲೇ 30 ಲಕ್ಷ ರೂ ದಂಡ ವಸೂಲಿಯಾಗಿದ್ದ ಇನ್ನೂ ದಂಡ ಪ್ರಮಾಣ ಕೋಟ್ಯಾಂತರ ರೂಪಾಯಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಕ್ರಮವಾಗಿ ಕಾರ್ಡ್ ಪಡೆದಿರುವುದು ದೃಢ ಪಟ್ಟರೆ ಯಾವ ದಿನಾಂಕದಂದು ಪಡಿತರ ಪಡೆಯಲಾಗುತ್ತಿದೆಯೋ ಅಲ್ಲಿಂದ ಈಗಿನ ವರೆಗಿನ ಪ್ರತಿ ತಿಂಗಳು ಕುಟುಂಬದ ಸದಸ್ಯರು ಪಡೆಯುತ್ತಿರುವ ಪ್ರತಿ ಕೆ.ಜಿ ಅಕ್ಕಿಗೆ 28ರೂ.ನಂತೆ ಲೆಕ್ಕ ಹಾಕಿ ದಂಡ ವಿಧಿಸಲಾಗುತ್ತದೆ. ಒಂದು ಕಾರ್ಡ್ ನಲ್ಲಿ 3 ಅಥಾವ 4 ಸದಸ್ಯರು ಇದ್ದರೂ ಅವರು ಪಡೆದಿರುವ ಪಡಿತರ ಲೆಕ್ಕ ಹಾಕಿ ವಸೂಲಿ ಮಾಡಲಾಗುತ್ತದೆ. ಹಾಗೂ ಕಾರ್ಯಾಚರಣೆ ವೇಳೆಯಲ್ಲಿ ಸಿಕ್ಕಿಬೀಳುವ ಕಾರ್ಡ್ ಗಳಿಗೆ ದಂಡ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















There plenty of people holding BPL card who are rich having car, scooter etc. Food department officials take huge bribe & cheat the Govt by issuing BPL card. When Indira canteen gives subsidized BF, Lunch & Dinner why BPL card. 85% of the BPL cards are bogus. It is also vote Bank gimmick.