ನ್ಯೂಸ್ ನಾಟೌಟ್ : ದೇಶದ ರಕ್ಷಣೆಯಲ್ಲಿ 40 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ ಟಿ-565 ಯುದ್ಧ ಟ್ಯಾಂಕ್ ಅನ್ನು ಭಾರತೀಯ ರಕ್ಷಣಾ ಸಚಿವಾಲಯವು ಶ್ರೀ ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದೆ. “ಮಂಜೂಷಾ” ವಸ್ತು ಸಂಗ್ರಹಾಲಯಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಇದು ಸಾಕಷ್ಟು ಕುತೂಹಲ ಕೆರಳಿಸಿದೆ.
1971ರ ಇಂಡೋ ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಇದು ಬಳಕೆಯಾಗಿದೆ. 40 ಟನ್‌ಗಳಷ್ಟು ತೂಕ ಹೊಂದಿರುವ ಟ್ಯಾಂಕ್ 9 ಅಡಿ ಎತ್ತರ, 27.6 ಅಡಿ ಉದ್ದ ಮತ್ತು 10.8 ಅಗಲ ಹೊಂದಿದೆ. ಗರಿಷ್ಠ ವೇಗವು ಗಂಟೆಗೆ 51 ಕಿ.ಮೀ. ಆಗಿದೆ. ಸಾಮರ್ಥ್ಯವು 500 ಅಶ್ವಶಕ್ತಿಯಾಗಿದೆ. 1968ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು. ಸೋವಿಯತ್ ಒಕ್ಕೂಟ ಸಿಬ್ಬಂದಿ ಈ ಯುದ್ಧ ಟ್ಯಾಂಕ್ ಅನ್ನು ತಯಾರು ಮಾಡಿದ್ದರು.


















