ಎರಡು ವರ್ಷ ಪ್ರಾಯದ ಹೆಣ್ಣು ಮಗು ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ದಾನ ಮಾಡುವ ಮೂಲಕ ಸುದ್ದಿಯಾದ ಘಟನೆ ಮಂಗಳೂರಿನ ಮರೋಳಿ ಎಂಬಲ್ಲಿ ನಡೆದಿದೆ.
ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲೆಂದು ಈ ಪುಟ್ಟ ಹುಡುಗಿ ತನ್ನ ಕೂದಲನ್ನೇ ದಾನ ಮಾಡಿದ್ದು,ಈಕೆಯ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.ಹಲವು ಮಂದಿ ಈ ಹುಡುಗಿಯ ಮಾದರಿ ಕಾರ್ಯಕ್ಕೆ ನಿಬ್ಬೆರಗಾಗಿ ಹೋಗಿದ್ದಾರೆ.ಈಕೆ ಮರೋಳಿಯ ಭರತ್ ಕುಲಾಲ್ ಮತ್ತು ಸುಮಲತಾ ದಂಪತಿಯ ಪುತ್ರಿ ಆದ್ಯ ಕುಲಾಲ್.ಈ ಸುದ್ದಿಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಮಗುವಿನ ಧೈರ್ಯ ಮತ್ತು ಆಸಕ್ತಿಯನ್ನು ನೋಡಿ ನಾನು ನಿಜವಾಗಿಯೂ ಭಾವುಕನಾದೆ ಎಂದು ಬರೆದುಕೊಂಡಿದ್ದಾರೆ. ಈಕೆ ಸಮಾಜಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸೇವೆ ಸಲ್ಲಿಸಲು ನಮ್ಮಲ್ಲಿ ಅನೇಕರನ್ನು ಪ್ರೇರೇಪಿಸಿಸುತ್ತಿದ್ದು, ಶ್ರೀಮತಿ ಸುಮಲತಾ ಮತ್ತು ಶ್ರೀ ಭರತ್ ಕುಲಾಲ್, ಮರೋಳಿ ಅವರ ಹೆಮ್ಮೆಯ ಪುತ್ರಿಯಾಗಿದ್ದಾಳೆ. ನೀವು ಅವಳನ್ನು ಸರಿಯಾಗಿ ಬೆಳೆಸುತ್ತಿದ್ದೀರಿ ಎಂದು ಬರೆದು ಪ್ರೋತ್ಸಾಹಿಸಿದ್ದಾರೆ.


















