ನ್ಯೂಸ್ ನಾಟೌಟ್: ಕುಕ್ಕೆ ದೇಗುಲದ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯು ಮುಂದಿನ ಐದು ವರ್ಷಗಳವರೆಗೆ ಮಾಲಿಕತ್ವ ಪ್ರಮಾಣ ಪತ್ರ ನೀಡಿದೆ. ಕೆಲ ವರ್ಷಗಳ ಹಿಂದೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದ ಆನಂದ ಸಿಂಗ್ ಆನೆಯನ್ನು ದೇಗುಲಕ್ಕೆ ಕೊಡಮಾಡಿದ್ದರು.ಕಳೆದ 18 ವರ್ಷಗಳಿಂದ ಕುಕ್ಕೆ ದೇಗುಲದಲ್ಲಿ ಆನೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲಿಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಅರಣ್ಯ ಇಲಾಖೆಯ ಈ ಅನುಮತಿ ಪತ್ರಕ್ಕಾಗಿ ದೇವಸ್ಥಾನದ ವ್ಯವಸ್ಥಾವನಾ ಸಮಿತಿ ಸದಸ್ಯಶ್ರೀವತ್ಸ ಅವರು ಕೆಲಸ ಮಾಡಿರುವುದಾಗಿ ತಿಳಿದು ಬಂದಿದೆ.










