ನ್ಯೂಸ್ ನಾಟೌಟ್: ಎಲ್‌ಪಿಜಿ ಸಿಲಿಂಡರ್ ನಿಯಮ ಬದಲಾಗಿದೆ. ಈ ಹಿಂದಿಂತೆ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಸಲು ಹೋದರೆ ಸಂಕಷ್ಟ ಅನುಭವಿಸುವುದು ಖಚಿತ. ಕಾರಣ ಸರ್ಕಾರ ಇದೀಗ ಹೊಸ ನಿಯಮ ಜಾರಿಗೆ ತಂದಿದೆ. ವರ್ಷದಲ್ಲಿ ಎಷ್ಟು ಸಿಲಿಂಡರ್ ಬುಕ್ ಮಾಡಬೇಕು ಅನ್ನೋದನ್ನು ನಿಯಮದಲ್ಲಿ ಹೇಳಲಾಗಿದೆ. ಹೊ ನಿಯಮದಲ್ಲಿ ಹಲವು ನಿರ್ಬಂಧಗಳಿವೆ. ಇದೀಗ ಗ್ರಾಹಕರು ವರ್ಷಕ್ಕೆ 15 ಗ್ಯಾಸ್ ಸಿಲಿಂಡರ್ ಮಾತ್ರ ಬುಕ್ ಮಾಡಿಕೊಳ್ಳಲು ಅವಕಾಶವಿದೆ. ಒಂದು ವರ್ಷದಲ್ಲಿ 15ಕ್ಕಿಂತ ಹೆಚ್ಚಿನ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಕೆ ಮಾಡಲು ಗ್ರಾಹಕರಿಗೆ ಅವಕಾಶವಿಲ್ಲ. ಹಾಗಂತ ಒಂದೇ ತಿಂಗಳಲ್ಲಿ 3 ರಿಂದ ನಾಲ್ಕು ಸಿಲಿಂಡರ್ ಬುಕ್ ಮಾಡಲು ಅವಕಾಶವಿಲ್ಲ. ಕಾರಣ ಒಂದು ತಿಂಗಳಲ್ಲಿ 2 ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಅಥವಾ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಎರಡಕ್ಕಿಂತ ಹೆಚ್ಚು ಸಿಲಿಂಡರ್ ಒಂದೇ ತಿಂಗಳಲ್ಲಿ ಬುಕ್ ಮಾಡಲು ಸಾಧ್ಯವಿಲ್ಲ.
ಸಬ್ಸಿಡಿ ಸಿಲಿಂಡರ್ ಸಂಖ್ಯೆ ಎಷ್ಟು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ. ವರ್ಷದಲ್ಲಿ ಸಬ್ಸಡಿ ಸಿಲಿಂಡರ್ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಹೇಳಿದೆ. ಹೊಸ ನಿಯಮದ ಪ್ರಕಾರ ವರ್ಷದಲ್ಲಿನ ಗರಿಷ್ಠ 15 ಸಿಲಿಂಡರ್ ಪೈಕಿ 12 ಸಿಲಿಂಡರ್‌ಗೆ ಸಬ್ಸಡಿ ಸಿಗಲಿದೆ.
ಬೆಲೆ ಏರಿಕೆ ತಾಪದ ನಡುವೆ ವಾಣಿಜ್ಯಿಕ ಅಡುಗೆ ಅನಿಲ ಸಿಲಿಂಡರ್ ದರವನ್ನು ತೈಲ ಕಂಪನಿಗಳು 25 ರು.ನಷ್ಟುಇಳಿಸಿವೆ. ಇದೇ ವೇಳೆ ವೈಮಾನಿಕ ಇಂಧನ ದರವೂ ಕಿಲೋಲೀಟರ್‌ಗೆ 5,521 ರು. ಇಳಿಕೆ ಆಗಿದೆ. ಹೋಟೆಲ್‌ಗಳು ಹೆಚ್ಚಾಗಿ ಬಳಸುವ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ನ ದರ ಶನಿವಾರ 25.50 ರು. ಇಳಿಕೆ ಕಂಡಿದೆ. ಇದರಿಂದ ರು. 1,885 ಇದ್ದ ಸಿಲಿಂಡರ್ ದರ 1859.5 ರು.ಗೆ ಇಳಿದಿದೆ. ಆದರೆ ಗೃಹ ಬಳಕೆಯ 14.2 ಕೆ.ಜಿ ಸಿಲಿಂಡರ್ ಬೆಲೆ 1,053 ರು. ಇದು, ಬದಲಾವಣೆ ಆಗಿಲ್ಲ. ಜೂನ್‌ನಿಂದ ಈವರೆಗೆ ವಾಣಿಜ್ಯ ಸಿಲಿಂಡರ್ ದರ 494.5 ರು. ಇಳಿಕೆಯಾಗಿದೆ. ಹಾಗೆಯೇ ಪೆಟ್ರೋಲ್, ಡೀಸೆಲ್ ದರ ಕೂಡ 6 ತಿಂಗಳಿಂದ ಪರಿಷ್ಕರಣೆ ಆಗಿಲ್ಲ.


















