ನ್ಯೂಸ್ ನಾಟೌಟ್: ವೇದಿಕೆಯಲ್ಲಿ ಹನುಮಾನ್ ಕಟೌಟ್ ಪೋಟೋ ಹಾಕಿ ಮಹಿಳಾ ದೇಹದಾರ್ಢ್ಯ ಸ್ಪರ್ಧೆ ನಡೆಸಿ ಭಾರಿ ವಿವಾದಕ್ಕೆ ಕಾರಣವಾಗಿದೆ.
ಮಾ.4,5 ರಂದು ರತ್ಲಾಮ್ ನಲ್ಲಿ 13ನೇ ಮಹಿಳಾ ದೇಹದಾರ್ಢ್ಯ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯನ್ನು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ಅವರು ಉದ್ಘಾಟನೆ ಮಾಡಿದ್ದರು. ವೇದಿಕೆಯಲ್ಲಿ ಹನುಮಾನ್ ಕಟೌಟ್ ಪೋಟೋದ ಮುಂದೆ ಮಹಿಳಾ ಬಾಡಿ ಬಿಲ್ಡರ್ಸ್ ಗಳು ಬಿಕಿನಿಯಂತಿರುವ ಉಡುಪುಗಳನ್ನು ಧರಿಸಿಕೊಂಡು ದೇಹದಾರ್ಢ್ಯ ಪ್ರದರ್ಶನವನ್ನು ಮಾಡಿರುವುದು ಅಸಭ್ಯ, ಆಶ್ಲೀಲವೆಂದು ಕಾಂಗ್ರೆಸ್ ಆರೋಪಿಸಿದೆ.
https://twitter.com/BhupendraAgam/status/1632394496209195008?ref_src=twsrc%5Etfw%7Ctwcamp%5Etweetembed%7Ctwterm%5E1632394496209195008%7Ctwgr%5E011ff18acaf861c5e9591851a24bcd3cc4d9db2d%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fcongress-bjp-clash-over-women-bodybuilders-posing-in-front-of-lord-hanuman-cut-out-at-mp-event
ಸ್ಪರ್ಧೆ ಬಳಿಕ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಗಂಗಾಜಲವನ್ನು ಸಿಂಪಡಿಸಿ ಶುದ್ಧಗೊಳಿಸಿದರು ಎಂಬ ಮಾಹಿತಿ ತಿಳಿದುಬಂದಿದೆ. ‘ಯಾರೆಲ್ಲಾ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಅವರನ್ನು ಹನುಮಂತ ದೇವರು ಶಿಕ್ಷಿಸದೇ ಬಿಡುವುದಿಲ್ಲ’ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಮಯಾಂಕ್ ಜಾಟ್ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಹಿತೇಶ್ ಬಾಜಪೇಯಿ ‘ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುವುದನ್ನು ನೋಡುವುದು ಕಾಂಗ್ರೆಸ್ಗೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.


















