ನ್ಯೂಸ್ ನಾಟೌಟ್ : ದ.ಕ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ವರದಿಯಾಗಿದೆ.ಘಟನೆಯಿಂದ ಅಪಾರ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಕೊಯಿಲ ಪಶು ಸಂಗೋಪನ ಕೇಂದ್ರ ಹಲವು ಕಾರಣಗಳಿಗೆ ವಿಶೇಷವಾಗಿತ್ತು.ಘಟನೆಯಿಂದ ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಹಬ್ಬಿದೆ ಎನ್ನಲಾಗಿದೆ. ಪ್ರಕೃತಿ ರಮಣೀಯವಾದ ಈ ಪರಿಸರ ಸದ್ಯ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲುಗಳಿಂದ ಆವೃತ್ತವಾಗಿತ್ತು.ನಿನ್ನೆ ಇದೇ ವ್ಯಾಪ್ತಿಯೊಂದರ ಗುಡ್ಡಭಾಗದಲ್ಲಿ ಬೆಂಕಿ ಹೊತ್ತಿ ಉರಿದಿದ್ದು ನಷ್ಟ ಸಂಭವಿಸಿತ್ತು.
ಇಂದು ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಈ ಘಟನೆ ನಡೆದಿದ್ದು, ಬೆಂಕಿ ತಗುಲಿದ ಕೆಲವೇ ಕೆಲವು ನಿಮಿಷದಲ್ಲಿ ಸುಮಾರು 50 ಎಕರೆಗೆ ಬೆಂಕಿ ಹಬ್ಬಿದೆ ಎಂದು ಹೇಳಲಾಗುತ್ತಿದೆ.ಬೆಂಕಿಯ ಕೆನ್ನಾಲಿಗೆಯ ಜತೆಗೆ ದಟ್ಟ ಹೊಗೆ ಭಯ ಬೀಳಿಸುವ ದೃಶ್ಯವೇ ಸೃಷ್ಟಿಯಾಗಿತ್ತು.ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಫಾರ್ಮ್ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.


















