ನ್ಯೂಸ್ ನಾಟೌಟ್ : ಚಲಿಸುತ್ತಿದ್ದ ಪಿಕ್ ಅಪ್ ವಾಹನದ ಚಕ್ರ ಕಳಚಿದ ಘಟನೆ ಮಡಿಕೇರಿಯ ನಾಪೋಕ್ಲು ಪಾರಾಣೆ ಮುಖ್ಯ ರಸ್ತೆಯ ಬೇತು ಗ್ರಾಮದ ತಿರುವಿನಲ್ಲಿ ಸಂಭವಿಸಿದೆ.ತೋಟದ ಕೆಲಸಕ್ಕೆಂದು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್ ಅಪ್‌ನಿಂದ ಅಚಾನಕ್ ಆಗಿ ಚಕ್ರ ಕಳಚಿದೆ.
ಭಾರೀ ಅಪಘಾತವಾದರೂ ಕಾರ್ಮಿಕರು ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಎಮ್ಮೆಮಾಡು ಕೂರುಳಿ ಗ್ರಾಮದಿಂದ ತೋಟದ ಮಾಲಕರೊಬ್ಬರು ಕಾರ್ಮಿಕರನ್ನು ಸಾಗಿಸುತ್ತಿದ್ದಾಗ ವಾಹನದ ಆಕ್ಸಿಲ್ ತುಂಡಾಗಿದೆ. ಪರಿಣಾಮ ಚಕ್ರ ಕಳಚಿಕೊಂಡಿತು. ಈ ದೃಶ್ಯ ಸ್ಥಳೀಯ ಆಟೋ ಚಾಲಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ಫೋಟೊ ಬಾರಿ ವೈರಲ್ ಆಗಿದೆ.
ಚಕ್ರ ಕಳಚುತ್ತಿದ್ದರೂ ಸುಮಾರು 20 ಮೀ. ದೂರ ಚಲಿಸಿದರೂ ವಾಹನ ಪಲ್ಟಿಯಾಗದಂತೆ ಚಾಲಕ ಸಮಯ ಪ್ರಜ್ಞೆ ಮೆರೆದು ನಿಯಂತ್ರಿಸಿದ್ದಕ್ಕೆ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ. ವಾಹನದಲ್ಲಿ ಸಣ್ಣಮಕ್ಕಳ ಸಹಿತ 15ಕ್ಕೂ ಅಧಿಕ ಕಾರ್ಮಿಕರಿದ್ದು ಅವರ ಜೀವ ಉಳಿಸಿದ ಚಾಲಕನಿಗೆ ಮೆಚ್ಚುಗೆ ಸೂಚಿಸಿದ್ದಾರೆ.


















