ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ನ್ಯೂಸ್‌ನಾಟೌಟ್: ತಂದೆಯನ್ನು ಕೊಂದ ಆರೋಪದಲ್ಲಿ ಜೈಲು ಸೇರಿದ್ದ ಪೆರಂಪಳ್ಳಿಯ ಭಂಡಾರದ ಮನೆ ನಿವಾಸಿ ಪ್ರಜೋತ್ ಶೆಟ್ಟಿ (50) ಅಪರಾಧಿ ಎಂದು ಸಾಬೀತಾಗಿದ್ದು, ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್ ಹೆಗ್ಡೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಮೂರು ವರ್ಷಗಳ ಹಿಂದೆ ಕೃತ್ಯವೆಸಗಿದ್ದ ಪ್ರಜೋತ್ ಶೆಟ್ಟಿ, ಪ್ರಕರಣಕ್ಕೆ ಸಂಬಂಧಿಸಿದಂತೆ 35 ಸಾಕ್ಷಿಗಳ ಪೈಕಿ 25 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. ಪ್ರಜೋತ್ ಶೆಟ್ಟಿ ತಪ್ಪಿತಸ್ಥ ಎಂದು ನ್ಯಾಯಾಲಯ ತಿಳಿಸಿದೆ. ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿದೆ. ಜತೆಗೆ ಹೆತ್ತ ತಾಯಿಗೆ ಹೊಡೆದಿದ್ದಕ್ಕೆ ಮೂರು ತಿಂಗಳ ಸಾದಾ ಜೈಲುವಾಸ ಅನುಭವಿಸಬೇಕಾಗಿದೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.


















