ನ್ಯೂಸ್ ನಾಟೌಟ್: ಮನೆಯಿಂದ ಕೆಲಸಕ್ಕೆ ಹೋದ ಯುವತಿ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿನ ಸುರತ್ಕಲ್ ನ ಮೂರನೇ ಬ್ಲಾಕ್ ನಿವಾಸಿ 20 ವರ್ಷದ ಶಿವಾನಿ ನಾಪತ್ತೆಯಾದ ಯುವತಿ ಎಂದು ತಿಳಿದು ಬಂದಿದೆ. ಈಕೆ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಸೋಮವಾರವೂ ಎಂದಿನಂತೆಯೇ ಕೆಲಸಕ್ಕೆ ಹೋಗಿದ್ದಳು. ಆದರೆ ಎಷ್ಟು ಹೊತ್ತು ಆದರೂ ಸಂಜೆ ಈಕೆ ಮನೆಗೆ ಮರಳಿ ಬಂದಿರುವುದಿಲ್ಲ. ಸದ್ಯ ಯುವತಿಯ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.










