ನ್ಯೂಸ್ ನಾಟೌಟ್: ಭೂಗತ ಪಾತಕಿ ಛೋಟಾ ರಾಜನ್ ಪಾತಕ ಲೋಕದ ಹೆಜ್ಜೆ ಗುರುತುಗಳು ಹಲವಾರು. ಆತನ ರಕ್ತಸಿಕ್ತ ಇತಿಹಾಸ ಹಲವಾರು ಕಥೆಗಳನ್ನೇ ಹೇಳುತ್ತಿದೆ. ಅಂತಹ ನಟೋರಿಯಸ್ ಡಾನ್‌ನ ಹುಟ್ಟು ಹಬ್ಬಕ್ಕೆ ಬ್ಯಾನರ್ ಹಾಕಿ ಸಂಭ್ರಮಿಸಿದವರ ವಿರುದ್ಧ ಇದೀಗ ಪೊಲೀಸ್ ದೂರು ದಾಖಲಾಗಿದೆ.
ಡಾನ್ ಹುಟ್ಟುಹಬ್ಬದ ಪ್ರಯುಕ್ತ ಆಯೊಜಿಸಿದ್ದ ಕಬಡ್ಡಿ ಕಾರ್ಯಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಈ ವೇಳೆ ಬ್ಯಾನರ್ ಕಬಡ್ಡಿ ಆಯೋಜಿಸಲಾದ ಸ್ಥಳದಲ್ಲಿ ಕಂಡು ಬಂದಿದೆ. ಪೋಸ್ಟರ್‌ನಲ್ಲಿ ನಮೂದಿಸಲಾದ ವಿವರಗಳಲ್ಲಿ ಸಾಗರ್ ರಾಜ್ ಗೋಲೆ ಎಂಬ ವ್ಯಕ್ತಿಯೇ ಸಂಘಟಕ ಎಂದು ಬರೆಯಲಾಗಿದ್ದು, ‘ಸಿಆರ್ ಸಾಮಾಜಿಕ ಸಂಘಟನೆ’ ಮಹಾರಾಷ್ಟ್ರದಲ್ಲಿ ಈ ಪೋಸ್ಟರ್ ಅನ್ನು ಅಳವಡಿಸಿದೆ ಎಂದು ತಿಳಿಸಲಾಗಿದೆ.
ಛೋಟಾ ರಾಜನ್ ಅವರ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ (Rajendra Sadashiv Nikalje) ಮೂಲತಃ ಚೆಂಬೂರಿನವ. ಸುಮಾರು ನಾಲ್ಕು ವರ್ಷಗಳ ಹಿಂದೆ ಆತನನ್ನು ಮಲೇಷ್ಯಾದಿಂದ ಗಡಿಪಾರು ಮಾಡಲಾಗಿತ್ತು. ಇತ್ತೀಚೆಗಷ್ಟೇ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ವರದಿಗಳ ಪ್ರಕಾರ, ಪೋಸ್ಟರ್ ಅನ್ನು ಹಾಕಲು ನಾಗರಿಕ ಮಂಡಳಿಯು ಯಾವುದೇ ಅನುಮತಿ ನೀಡದ ಕಾರಣ ಪೋಸ್ಟರ್ ಅನ್ನು ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ತೆಗೆದುಹಾಕಿದೆ.


















