ನಾಟೌಟ್ ನ್ಯೂಸ್ : ಕನ್ನಡ ಡಿಜಿಟಲ್ ಮಾಧ್ಯಮ ಲೋಕಕ್ಕೆ ನಿಖರ ಸುದ್ದಿಗಳನ್ನು ಹೊತ್ತುಕೊಂಡು ನ್ಯೂಸ್ ನಾಟೌಟ್ ಗುರುವಾರ ಸುಳ್ಯದಲ್ಲಿ ಪದಾರ್ಪಣೆ ಮಾಡಿದೆ.
ಸತ್ಯ ಸಮರ್ಥ ಎಂಬ ಧ್ಯೇಯ ಘೋಷದೊಂದಿಗೆ ಅಂಬೆಗಾಲಿಡುತ್ತಿರುವ ಮಾಧ್ಯಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿರುವ ಸುಳ್ಯದ ಕೆ.ವಿ.ಜಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಉದ್ಘಾಟಿಸಿದರು. ಇದೇ ವೇಳೆ ಹಲವಾರು ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ನ್ಯೂಸ್ ನಾಟೌಟ್ ನ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆ, ಸಹಾಯಕ ಸಂಪಾದಕ ಕಿಶೋರ್, ವಿಶೇಷ ಪ್ರತಿನಿಧಿ ದಯಾಮಣಿ ಹೇಮಂತ್, ಕಛೇರಿ ಸಿಬ್ಬಂದಿಗಳಾದ ಅಚಲ್ ವಿಟ್ಲ, ಶ್ರೀಜಿತ್, ರಸಿಕಾ ಮುರುಳ್ಯ, ಕೃತಿ, ನಿಶಾ ಹಾಜರಿದ್ದರು.



















Congratulations
Congratulations best of luck