ನ್ಯೂಸ್ ನಾಟೌಟ್: ತಾಯಿಯ ಹಾಲು ಕುಡಿದ ಮಕ್ಕಳಿಗೆ ಯಾವುದೇ ರೋಗ ಬರುವುದಿಲ್ಲ. ಅದೇ ರೀತಿ ಗೋವಿನ ಹಾಲು ಕುಡಿದ ಮಕ್ಕಳಿಗೂ ಯಾವುದೇ ರೋಗರುಜಿನೆಗಳು ಬರುವುದಿಲ್ಲ ಎಂದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದರು.
ಭಾರತದಲ್ಲಿ ಕೃಷಿಗೆ ತನ್ನದೇ ಆದ ವೈವಿದ್ಯತೆ ಇದೆ. ನಮ್ಮ ಜನರು ಕೃಷಿಯನ್ನು ಹೆಚ್ಚು ನಂಬಿದ್ದಾರೆ. ಅದರಲ್ಲೇ ಖುಷಿ ಕಂಡಿದ್ದಾರೆ. ಅಂತಹ ರೈತನಿಗೆ ಮಿತ್ರನಂತಿರುವುದು ನಮ್ಮ ಗೋವುಗಳು. ಅವುಗಳ ಹಾಲು ಪೌಷ್ಠಿಕಾಂಶಗಳ ಆಗರವಾಗಿದೆ. ಅಂತಹ ಗೋವಿನ ಹಾಲು ತಾಯಿಯ ಎದೆ ಹಾಲಿಗೆ ಸಮಾನ. ಯಾವ ಮಕ್ಕಳು ತಾಯಿಯ ಹಾಲಿನಿಂದ ವಂಚಿತರಾಗಿರುತ್ತಾರೋ ಅಂತಹ ಮಕ್ಕಳಿಗೆ ಗೋವಿನ ಹಾಲನ್ನು ನೀಡಬಹುದು ಎಂದು ಶ್ರೀ ಮೋಹನದಾಸ ಸ್ವಾಮೀಜಿ ತಿಳಿಸಿದರು. ನಮ್ಮ ರೈತರಿಗಾಗಿ ಇಂತಹ ಅದ್ಭುತ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲ ರೈತರು ಈ ಕೃಷಿ ಮೇಳದ ಅನುಕೂಲವನ್ನು ಪಡೆದುಕೊಂಡು ತಮ್ಮ ಜೀವನದಲ್ಲಿ ಯಶಸ್ಸುಗಳಿಸಬೇಕೆಂದು ಸ್ವಾಮೀಜಿ ಹಾರೈಸಿದರು.


















