ನ್ಯೂಸ್ ನಾಟೌಟ್ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ಭದ್ರತಾ ಸಿಬ್ಬಂದಿ ಗನ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪ್ರಕರಣ ಮಂಗಳವಾರ ವರದಿಯಾಗಿದೆ.
ವರದಿಯ ಪ್ರಕಾರ ಮುಖ್ಯಮಂತ್ರಿಯವರ ಕೊಠಡಿ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಮಂಗಳವಾರ ಬೆಳಗ್ಗೆ ೧೦ :೩೦ ಗಂಟೆ ಸುಮಾರು ಗನ್ ಸ್ವಚ್ಚಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ಗುಂಡಿನ ಜೋರಾದ ಶಬ್ಬಕ್ಕೆ ಭವನವೇ ನಡುಗಿದೆ. ತಕ್ಷಣವೇ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿದ್ದಾರೆ. ಗುಂಡು ಹಾರಿದ ಸಂದರ್ಭದಲ್ಲಿ ಗನ್ ಅನ್ನು ನೆಲದತ್ತ ಮುಖ ಮಾಡಿ ಹಿಡಿದುಕೊಂಡಿದ್ದರಿಂದ ಯಾವದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಪ್ರಕಾರ ಕೂಡಲೇ ತನಿಖೆ ನೆಡಸಬೇಕು ಎಂದು ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.


















