ನ್ಯೂಸ್ ನಾಟೌಟ್ : ದೇಶದಲ್ಲಿ ಮತ್ತೆ ಕೊರೊನಾ ಸೋಂಕು ತಾಂಡವ ಆಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ತಿಂಗಳಿನಿಂದ ಶಕ್ತಿ ಕಳೆದುಕೊಂಡು ಸುಮ್ಮನಾಗಿದ್ದ ಸೋಂಕು ಇದೀಗ ರೂಪಾಂತರಿಯಾಗಿ ಬದಲಾಗಿ ಜನಜೀವನದ ಜೊತೆಗೆ ಆಟಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ ಮಾಡುವ ಕುರಿತು ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಈ ಬೆನ್ನಲ್ಲೇ ಸ್ವಯಂ ಪ್ರೇರಿತರಾಗಿ ಜನರೇ ಮಾಸ್ಕ್ ಧರಿಸಿ ಓಡಾಡುತ್ತಿರುವುದು ಕಂಡು ಬರುತ್ತಿದೆ.
ಬಿಎಫ್ .7 ಮಹಾ ಸ್ಫೋಟ ಆತಂಕ ಹೆಚ್ಚಿದೆ. ಸರಕಾರ ಬಿಗಿ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಕೋವಿಡ್ ಆತಂಕ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿದೆ. ಒಂದು ವರ್ಷದಿಂದ ಎರಡು ಅಲೆಗಳ ಲಾಕ್‌ಡೌನ್ ಗೆ ಸಿಕ್ಕಿ ತತ್ತರಿಸಿದ್ದ ಜನ ಈಗ ಮತ್ತೊಮ್ಮೆ ಕಂಗಾಲಾಗಿದ್ದಾರೆ.
ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ ಎಂಟು ಮಂದಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಈ ಪ್ರಕಾರವಾಗಿ ನೋಡುವುದಾದರೆ ಇದು ಬಿಎಫ್ .7 ಎಂಬ ಆತಂಕ ವ್ಯಕ್ತವಾಗುತ್ತಿದೆ. ಅಂತಿಮ ಪರೀಕ್ಷಾ ವರದಿ ನಂತರ ವಿವರ ತಿಳಿದು ಬರಲಿದೆ. ಚೀನಾ, ಅಮೆರಿಕ, ಜಪಾನ್ , ಹಾಂಕಾಂಗ್ , ಕೊರಿಯಾದಲ್ಲಿ ಬಿಎಫ್ .7 ಅಟ್ಟಹಾಸಗೈಯುತ್ತಿದೆ.
ಕೇಂದ್ರ ಸರಕಾರ ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ವಿದೇಶದಿಂದ ಬಂದವರಿಗೆ ಕೋವಿಡ್ ಆರ್ ಟಿಪಿಸಿಆರ್ ಕಡ್ಡಾಯ ಮಾಡಿದೆ. ಮಾತ್ರವಲ್ಲ ಜೀವ ಉಳಿಸುವುದಕ್ಕೆ ಆಕ್ಸಿಜನ್ ಸಿದ್ಧಪಡಿಸಿಕೊಳ್ಳಿ ಎಂಬ ಸೂಚನೆಯನ್ನು ಎಲ್ಲ ಆಸ್ಪತ್ರೆಗಳಿಗೆ ರವಾನಿಸಿದೆ.
ನೆಗೆಟಿವ್ ರಿಪೋರ್ಟ್ ಇದ್ದರೂ ಆರ್‌ಟಿಪಿಸಿ ಆರ್ ಕಡ್ಡಾಯ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ವಿದೇಶದಿಂದ ಬಂದವರಿಗೆ ಕ್ವಾರೆಂಟೈನ್ ಕಡ್ಡಾಯ. ಜ್ವರದ ಲಕ್ಷಣ ಇದ್ದವರೂ ಕೂಡ ಕ್ವಾರೆಂಟೈನ್ ಗೆ ಒಳಗಾಗಬೇಕು. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯ ಸೂಚನೆಯನ್ನು ಪಾಲಿಸಬೇಕಿದೆ.


















