ನ್ಯೂಸ್ ನಾಟೌಟ್: ರಾಷ್ಟ್ರ ಮಟ್ಟದ ಸೈಕಲ್ ಪೋಲೋ ಕ್ರೀಡಾಪಟು ನೀರಿನಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ. ಪಾಂಡಿಚೇರಿ ಮೂಲದ ನಿವಾಸಿ ಆಲ್ ಹರ್ಶ್ (17) ಮೃತಪಟ್ಟವನು. ಈ ಘಟನೆ ಕೆ.ಆರ್ .ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಸಮೀಪದಲ್ಲಿ ನಡೆದಿದೆ.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದಿತ್ತು. ರಾಜ್ಯ ,ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟಕ್ಕೆ ಹೊರ ರಾಜ್ಯದಿಂದ ಹಲವಾರು ಕ್ರಿಡಾಪಟುಗಳು ಆಗಮಿಸಿದ್ದರು. ಕ್ರೀಡಾಕೂಟದ ವೇಳೆಗೆ ಅಲ್ಲೇ ಸಮೀಪದ ನದಿಯೊಂದಕ್ಕೆ ಆಲ್ ಹರ್ಶ್ ಈಜಲು ಹೋಗಿದ್ದರು. ಆ ನದಿಯಲ್ಲಿ ಈಜುತ್ತಿರುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಮೃತ ದೇಹವನ್ನು ಹೊರತೆಗೆದಿದ್ದಾರೆ. ಕೆ,ಆರ್ . ಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.


















