ನ್ಯೂಸ್ ನಾಟೌಟ್: ಮಂಗಳೂರು ನಗರದ ಮೀನುಗಾರಿಕ ಬಂದರಿನಲ್ಲಿ ಬಲೆ ಸಂಗ್ರಹಾರಕ್ಕೆ ಬೆಂಕಿ ತಗುಲಿದ್ದು ಲಕ್ಷಾಂತರ ಮೌಲ್ಯದ ಮೀನು ಹಿಡಿಯುವ ಬಲೆಗಳು ಸುಟ್ಟು ಭಸ್ಮವಾಗಿದೆ.
ಘಟನೆಯಲ್ಲಿ ಮೀನುಗಾರಿಕ ಬಂದರಿನ ಬಲೆ ಸಂಗ್ರಹಕಾರಕ್ಕೆ ಬೆಂಕಿ ತಗುಲಿದ್ದು,ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಗಲಾಗಿದೆ. ಬಲೆಗಳ ರಾಶಿಗೆ ಹೇಗೆ ಬೆಂಕಿ ಬಿತ್ತು ಎನ್ನವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಯಾವುದೇ ಪ್ರಾಣಾಪಾಯ ಆಗಿಲ್ಲ .ಇತ್ತೀಚಿನ ದಿನಗಲ್ಲಿ (ಅಕ್ಟೋಬರ್ ೨೮) ಇದೇ ಸ್ಥಳದಲ್ಲಿ ೩ ಸರಕು ದೋಣಿಗಳು ಬೆಂಕಿ ತಗುಲಿ ಸುಟ್ಟು ಕರಗಲಾಗಿತ್ತು.ಅಂತದೇ ಇನ್ನೊಂದು ಘಟನೆ ಇದಾಗಿದೆ ಎಂದು ತಿಳಿದು ಬಂದಿದೆ. ಇದು ಮೀನುಗಾರರ ಆಂತಕಕ್ಕೆ ಕಾರಣವಾಗಿದೆ.


















