ನ್ಯೂಸ್ ನಾಟೌಟ್ : ಹಾವು ಎಂದು ಕೇಳಿದರೆ ಸಾಕು ಎಲ್ಲರಿಗೂ ಭಯ, ನೀವು ಎಲ್ಲರೂ ಹಾವನ್ನು ಕುತ್ತಿಗೆಗೆ ಸುತ್ತಿಕೊಳ್ಳುವುದು ,ಆಟವಾಡಿಸುವುದು ,ಒಟ್ಟಿಗೆ ಮಲಗಿಸುವುದು ನೋಡಿದ್ದೀರಿ. ಆದರೆ ಎಲ್ಲಾದರೂ ಹಾವನ್ನು ಸ್ನಾನ ಮಾಡಿಸುವುದನ್ನು ನೋಡಿದ್ದೀರಾ? ಯಸ್, ಇಲ್ಲೊಬ್ಬ ಅಸಾಮಿ ವಿಷಕಾರಿ ಹಾವನ್ನು ಸೋಪ್ ಹಾಗು ಶ್ಯಾಂಪ್ ಹಾಕಿ ಸ್ನಾನ ಮಾಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇವನಿಗೆ ಯಾವುದೇ ಭಯವಿಲ್ಲ. ಮಗುವನ್ನು ಸ್ನಾನ ಮಾಡಿಸುವ ಹಾಗೆ ತನ್ನ ಮನೆಯಲ್ಲೇ ಸಾಕಿದ ಬೃಹತ್ ಗಾತ್ರದ ವಿಷಕಾರಿ ಕಾಳಿಂಗ ಸರ್ಪವನ್ನು ಪ್ರತಿನಿತ್ಯ ಸೋಪ್ ಹಾಗೂ ಶ್ಯಾಂಪ್ ಹಾಕಿ ಸ್ನಾನ ಮಾಡಿಸಿ ,ಜೋಗುಳ ಹಾಡಿ ಮಲಗಿಸುತ್ತಾನೆ. ಈ ವಿಡಿಯೋ ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿದ್ದು ಜನರಲ್ಲಿ ಭಾರಿ ಅಚ್ಚರಿಯನ್ನು ತಂದಿದೆ.


















