ನ್ಯೂಸ್ ನಾಟೌಟ್ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರಕ್ಕೆ ಇದ್ದ ದರವನ್ನು ಪರಿಷ್ಕರಿಸಲಾಗಿದೆ.
ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಶ್ರೀ ದೇವಳದಲ್ಲಿ ಸರ್ಪದೋಷ ನಿವಾರಣೆಗಾಗಿ ನಡೆಸುವ ಸರ್ಪಸಂಸ್ಕಾರ ಸೇವೆಯ ಸೇವಾ ದರವನ್ನು ಧಾರ್ಮಿಕ ದತ್ತಿ ಆಯುಕ್ತ ರ ಆದೇಶದಂತೆ 3,200.00 ರಿಂದ 4,200.00 ಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಭಕ್ತಾದಿಗಳು ಸಹಕರಿಸಬೇಕಾಗಿ ಶ್ರೀ ದೇವಳದಿಂದ ಪ್ರಕಟಣೆ ಮೂಲಕ ವಿನಂತಿಸಲಾಗಿದೆ.


















