ನ್ಯೂಸ್ ನಾಟೌಟ್ : ಸಿನಿಮೋದ್ಯಮದಲ್ಲಿ ಮಹಿಳೆಯರನ್ನು ಬಹಳಷ್ಟು ಕೀಳಾಗಿ ನೋಡಲಾಗುತ್ತದೆ. ಒಳ್ಳೆಯ ಅವಕಾಶ ಸಿಗುವುದಕ್ಕೆ ನಟಿ ಮಂಚ ಹಂಚಿಕೊಳ್ಳಬೇಕಾಗುತ್ತದೆ. ಹೀಗೆ ಅನೇಕ ಮಾತುಗಳನ್ನು ನಾವು ಅಲ್ಲಿ ಇಲ್ಲಿ ಹಲವು ಸಲ ಕೇಳಿದ್ದೇವೆ. ಇಂತಹ ಮಾತಿಗೆ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ.
ಕೆಲವರು ಈ ಬಗ್ಗೆ ಬಹಿರಂಗವಾಗಿಯೇ ಆರೋಪ ಮಾಡಿದ್ದಿದೆ. ಅದರಲ್ಲೂ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಹೆಣ್ಣು ಬಾಕಾ ಎಂದೇ ಇಂಡಸ್ಟ್ರಿಯಲ್ಲಿ ಕೆಟ್ಟ ಹೆಸರು ತೆಗೆದುಕೊಂಡಿದ್ದಾರೆ. ಅವರು ಅವಕಾಶ ಅರಸಿಕೊಂಡು ಬಂದ ಹುಡುಗಿಯರನ್ನು ಬೇರೆ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಅನ್ನುವ ಆರೋಪವಿದೆ. ಸ್ವತಃ ಯಾವ ನಟಿಯೂ ಇದುವರೆಗೆ ಓಂ ಪ್ರಕಾಶ್ ರಾವ್ ಬಗ್ಗೆ ಬಹಿರಂಗವಾಗಿ ಕೆಟ್ಟ ಮಾತನ್ನು ಈ ತನಕ ಆಡಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಖಾಸಗಿ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಸ್ವತಃ ಓಂ ಪ್ರಕಾಶ್ ರಾವ್ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಂಡಿದ್ದರು. ಈ ವಿಡಿಯೋ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆ ಓಂ ಪ್ರಕಾಶ್ ರಾವ್ ಅವರನ್ನು ಜನ ನೋಡುತ್ತಿದ್ದ ರೀತಿಯೇ ಬದಲಾಯಿತು. ಅವರ ಇಡೀ ಜೀವನದ ಮೇಲೆ ಕಪ್ಪು ಚುಕ್ಕೆಯಾಯಿತು.
ಓಂ ಪ್ರಕಾಶ್ ರಾವ್ ಅತ್ಯಂತ ಪ್ರತಿಭಾವಂತ ನಿರ್ದೇಶಕ. ೧೯೯೪ರಲ್ಲಿ ಪಾಳೆಗಾರ ಸಿನಿಮಾದ ಮೂಲದ ನಿರ್ದೇಶನ ಆರಂಭಿಸಿದ ಓಂ ಪ್ರಕಾಶ್ ಅದೇ ವರ್ಷ ಲಾಕಪ್ ಡೆತ್ ಅನ್ನುವ ಸಿನಿಮಾ ಮಾಡಿದ್ರು. ಈ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಅಲ್ಲದೆ ಸಿಂಹದ ಮರಿ, ಎಕೆ-೪೭, ಹುಚ್ಚ, ಪಾರ್ಥ, ಕಲಾಸಿಪಾಳ್ಯ, ಸಾಹುಕಾರ, ಅಣ್ಣಾವ್ರು, ಅಯ್ಯ, ಹುಬ್ಬಳ್ಳಿ, ಮಂಡ್ಯ, ಯೋಧಾ, ಸುಗ್ರೀವ, ಹುಲಿ, ಭೀಮಾ ತೀರದಲ್ಲಿ, ಶಿವ, ಚಂದ್ರಲೇಖ ಹುಚ್ಚ-೨, ತ್ರಿಶ್ಯೂಲಂ ಸಿನಿಮಾ ಸೇರಿದಂತೆ ಹಲವು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಟರಾಗಿಯೂ ಓಂ ಪ್ರಕಾಶ್ ರಾವ್ ಯಶಸ್ಸನ್ನು ಕಂಡಿದ್ದಾರೆ. ಇವರೊಬ್ಬ ಬಹುಮುಖ ಪ್ರತಿಭೆ ಅನ್ನುವುದು ಅವರು ನಿರ್ದೇಶಿಸಿ ಯಶಸ್ವಿಯಾದ ಸಿನಿಮಾಗಳೇ ಸಾಕ್ಷಿಯಾಗಿದೆ.
ನಾನು ದುಡ್ಡು ಕೊಟ್ಟು ತುಂಬಾ ಹುಡುಗೀರ ಜತೆ ಮಲಗಿದ್ದೇನೆ ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಾನು ಇಂಡಸ್ಟ್ರಿಯಲ್ಲಿ ಯಾರನ್ನೂ ಬಳಸಿಕೊಂಡಿಲ್ಲ. ಆದರೆ ದುಡ್ಡು ಕೊಟ್ಟು ತುಂಬಾ ಜನರನ್ನು ಬಳಸಿಕೊಂಡಿದ್ದೇನೆ, ಇದು ನನ್ನ ಹೆಂಡತಿಗೂ ಗೊತ್ತು ಎಂದು ಹೇಳುವ ವಿಡಿಯೋ ಈಗ ವೈರಲ್ ಆಗುತ್ತಿದೆ.


















