ನ್ಯೂಸ್ ನಾಟೌಟ್: ಸಾಕು ಪ್ರಾಣಿಗಳಿಗೆ ಮನುಷ್ಯನ ಮೇಲೆ ಗಾಢವಾದ ಪ್ರೀತಿ ಇರುತ್ತದೆ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಾವುತನನ್ನು ಕೂರಿಸಿಕೊಂಡು ಆನೆಯೊಂದು ಉಕ್ಕಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ಬರೋಬ್ಬರಿ 3 ಕಿ.ಮೀ. ಈಜಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ವೈರಲ್ ಆಗಿದೆ.
ಈ ವಿಡಿಯೊವನ್ನು ಪತ್ರಕರ್ತ ರೊಬ್ಬರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಭಾರೀ ವೀಕ್ಷಣೆಗೆ ಕಾರಣವಾಗಿದೆ. ಆನೆಯೊಂದು ಬಿಹಾರದ ರಾಘವಪುರ ಪ್ರದೇಶದಿಂದ ಪಟ್ನಾದವರೆಗೆ ಗಂಗಾ ನದಿಯಲ್ಲಿ ಮಾವುತನನ್ನು ಕೂರಿಸಿಕೊಂಡು ಮೂರು ಕಿ.ಮೀ. ಈಜಿಕೊಂಡು ದಡ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ. ಆನೆಗಳು ಸಹಜವಾಗಿ ಆಳ ನೀರಿಗೆ ಹೋಗುವುದಿಲ್ಲ. ಒಂದು ವೇಳೆ ಹೋದರೂ ಯಶಸ್ವಿಯಾಗಿ ಈಜಲು ಸಮರ್ಥವಾಗಿರುತ್ತವೆ. ಆದರೆ ದೂರದವರೆಗೆ ಈಜುವುದೂ ತುಂಬಾ ವಿರಳ.


















