ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಬಂದರು ಮೀನುಗಾರಿಕೆ ಒಳನಾಡು ಸಾರಿಗೆ ಸಚಿವ ಎಸ್ ಅಂಗಾರ ಅವರಿಗೆ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷ ಜಿ. ಕೆ.ಹಮೀದ್ ಗೂನಡ್ಕ, ಪಂಚಾಯತ್ ಸದಸ್ಯ ಎಸ್. ಕೆ. ಹನೀಫ್ ಹಾಗೂ ರಿಯಾಜ್ ಎಸ್. ಎ ಮನವಿ ಸಲ್ಲಿಸಿದರು. ಗುತ್ತಿಗಾರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಲಾಯಿತು.










