ಕಟೀಲು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಕ್ರೀಡೆಗೆ ಭಾರಿ ಮಹತ್ವವಿದೆ. ಅಂತಹ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ಇಲ್ಲಿ ದೇವರಂತೆ ಆರಾಧಿಸಲಾಗುತ್ತದೆ. ಆದರೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಕೋಣವೊಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಏಳಿಂಜೆಯ ಲೋಕನಾಥ ಶೆಟ್ಟಿ ಅಂಗಡಿಗುತ್ತು ರವರ ಕೋಣವನ್ನು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು.ಸುತ್ತಮುತ್ತ ಕೋಣದ ಹುಡುಕಾಟ ನಡೆಸಲಾಗಿದ್ದು, ಕೋಣ ಪತ್ತೆಯಾಗಿಲ್ಲ ಎಂದು ಲೋಕನಾಥ ಶೆಟ್ಟಿ ತಿಳಿಸಿದ್ದಾರೆ.










