ಏನೆಕಲ್ಲು: ಇಲ್ಲಿನ ವ್ಯಕ್ತಿಯೊಬ್ದರ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಏನೆಕಲ್ಲು ಗ್ರಾಮದ ಪರಮಲೆ ವೆಂಕಟರಮಣ ಗೌಡರು ಎಂದ ತಿಳಿದು ಬಂದಿದೆ. ಅವರಿಗೆ 72 ವರ್ಷವಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










