ಚೆನ್ನೈ: ಕರೋನಾದ ರೂಪಾಂತರಿ ವೈರಾಣುಗಳಲ್ಲೇ ಅತ್ಯಂತ ವೇಗವಾಗಿ ಪ್ರಸರಣಗೊಳ್ಳುವ ತಳಿಯಾದ ಓಮೈಕ್ರಾನ್ನ ಉಪ ರೂಪಾಂತರಿ BA.2 ವೈರಸ್ ತಮಿಳುನಾಡಿನಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗಿದೆ. ಇದು ಡೆಲ್ಟಾವನ್ನೂ ಹಿಂದಿಕ್ಕಿದ್ದು ಕರೋನಾದ ಮತ್ತೊಂದು ಅಲೆಯನ್ನು ಉತ್ತುಂಗಕ್ಕೆ ಏರಿಸುವಷ್ಟು ಪ್ರಬಲವಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಹಾಗಿದ್ದಾಗ್ಯೂ ಇದರ ಬಗ್ಗೆ ಹೆದರುವ ಅಗತ್ಯವಿಲ್ಲ ಎಂಬುದನ್ನೂ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಜನವರಿಯಿಂದ ಮಾರ್ಚ್ 28ರವರೆಗೆ ದಾಖಲಾದ ಕೊವಿಡ್ 19ನ ಎಲ್ಲ ರೂಪಾಂತರಿ ಕೇಸ್ಗಳಲ್ಲಿ ಒಮೈಕ್ರಾನ್ನ ಉಪ-ರೂಪಾಂತರಿ ವೈರಸ್ ಬಿಎ.2 ಪ್ರಮಾಣ ಶೇ.93.4ರಷ್ಟು ಹೆಚ್ಚಳವಾಗಿದೆ ಎಂದು ಸಾರ್ವಜನಿಕ ಆರೋಗ್ಯ ಮತ್ತು ಪ್ರಿವೆಂಟಿವ್ ಮೆಡಿಸಿನ್ ನಿರ್ದೇಶನಾಲಯದ ಮಾಹಿತಿಯಲ್ಲಿ ಉಲ್ಲೇಖವಾಗಿದೆ.










