ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಇಂದು ಸಿಬಿಎಸ್ ಸಿ 10 ನೇ ತರಗತಿ ಫಲಿತಾಂಶ ಪ್ರಕಟಿಸಲಿದೆ. 10 ನೇ ತರಗತಿಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದಾಗಿದೆ. ಫಲಿತಾಂಶವನ್ನು https://www.cbse.gov.in/ ಇಲ್ಲಿ ಪರಿಶೀಲಿಸಬಹುದಾಗಿದೆ._ಜೊತೆಗೆ ಐವಿಎಸ್, ಎಸ್ಎಂಎಸ್ ಮತ್ತು ಉಮಂಗ್ ಆಪ್ ನಲ್ಲಿ ಫಲಿತಾಂಶ ಲಭ್ಯವಿದೆ.ಅಭ್ಯರ್ಥಿಗಳು ಸಿಬಿಎಸ್‌ಸಿ ಡಿಜಿಲಾಕರ್ ವೆಬ್ ಸೈಟ್, ಗೆ ಲಾಗ್ ಇನ್ ಮಾಡಿ, ಅಂಕಪಟ್ಟಿ, ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಕರೋನಾ ಹಿನ್ನೆಲೆ ಮೌಲ್ಯಮಾಪನ ವಿಧಾನದಲ್ಲಿ ಫಲಿತಾಂಶ ನೀಡಲಾಗಿದೆ. ತೃಪ್ತಿ ಇಲ್ಲದವರು ಕರೋನಾ ನಂತರ ಪರೀಕ್ಷೆ ಬರೆಯಲು ಅವಕಾಶವಿದೆ.










