• ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
Friday, March 20, 2026
  • Login
News not out
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ
    • All
    • ಕೃಷಿ ಸಂಪತ್ತು
    • ನಮ್ಮ ತುಳುವೇರ್
    • ಭಕ್ತಿಭಾವ
    • ಮಹಿಳೆ-ಆರೋಗ್ಯ
    • ಯಕ್ಷಯಾನ
    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ಖರ್ಚಿಲ್ಲದೆ ಆಕರ್ಷಕ ಹೊಳೆಯುವ ನೆಕ್ಲೇಸ್ ಗಿಫ್ಟ್ ನೀಡಿದ ಹುಡುಗ,ಸಂಗಾತಿ ಫುಲ್ ಖು‍ಷ್

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ವಾಟ್ಸ್ಯಾಪ್ ಬಳಕೆದಾರರಿಗೆ ಗುಡ್ ನ್ಯೂಸ್; ಇನ್ನು ಸಿಗಲಿದೆ ಕಾಲ್ ಶೆಡ್ಯೂಲ್ ಆಯ್ಕೆ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಆಂಧ್ರಪ್ರದೇಶದಲ್ಲಿ 3000 ದೇವಸ್ಥಾನ ನಿರ್ಮಾಣ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಕೃಷಿ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್! ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನ

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಬಂಟ್ವಾಳ: ಏನಿದು ಮಲ್ಟಿ ಟ್ರೀ ಬೈಕ್ ? ಲೀಟರ್ ಪೆಟ್ರೋಲ್‌ ಹಾಕಿ 80 ಮರ ಏರಬಹುದೇ..!

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ಪ್ರತಿದಿನ ಲವಂಗ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

    ಬರವಣಿಗೆ ಇರುವ ನೋಟುಗಳನ್ನು ಸ್ವೀಕರಿಸುವುದಿಲ್ಲವೇ?ಇದರ ಸತ್ಯಾಂಶ ಇಲ್ಲಿದೆ…

No Result
View All Result

ಉಡುಪಿಯಲ್ಲಿ ಹೀಗೊಂದು ರಿಯಲ್ ಬಾಕ್ಸಿಂಗ್‌ ತೂಫಾನ್ !

ನ್ಯೂಸ್‌ ನಾಟೌಟ್‌ ಪ್ರತಿನಿಧಿ by ನ್ಯೂಸ್‌ ನಾಟೌಟ್‌ ಪ್ರತಿನಿಧಿ
July 25, 2021
in ನಮ್ಮಲ್ಲೇ ಫಸ್ಟ್
1 0
0
ಉಡುಪಿಯಲ್ಲಿ ಹೀಗೊಂದು  ರಿಯಲ್ ಬಾಕ್ಸಿಂಗ್‌ ತೂಫಾನ್ !
Share on FacebookShare on Twitter

ಉಡುಪಿ: ಮೊದಲ‌ ಚಿತ್ರದಲ್ಲಿ ಪೊರಕೆ ಹಿಡಿದು ಗುಡಿಸುತ್ತಿರುವ ವ್ಯಕ್ತಿ ಯಮನೂರ. ಬಾದಾಮಿ ಜಿಲ್ಲೆಯ ವಲಸೆ ಕಾರ್ಮಿಕ. ಐದನೇ ತರಗತಿ ಓದಿರುವ 26 ವರ್ಷದ ಯುವಕ. ದಿನಕೂಲಿ ನೌಕರ. ಸದ್ಯಕ್ಕೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಸಪೋರ್ಟ್ ಸ್ಟಾಫ್.

ಹಿಂದೊಮ್ಮೆ ಹೀಗೇ ಗುಡಿಸುತ್ತಿದ್ದ. ನಾವು ಬಂದದ್ದು ನೋಡಿ ಕತ್ತೆತ್ತಿ, ಬಾಯಗಲಿಸಿ ನಮಸ್ತೆ ಸರ್ ಎಂದವನ ಕಣ್ಣು ಬಾತಿದೆ. ರಕ್ತ ಒಸರಿದೆ. ಆದರೂ ನಗು ಮುಂದುವರೆದಿದೆ. ಇದೇನಾಯ್ತು? ಆಕ್ಸಿಡೆಂಟಾ? ತೂಫಾನಿನಂತಹ ಕಥೆ ಆಗ ಹೊರಬಿತ್ತು ನೋಡಿ.

Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget >

ಊರಿನಲ್ಲಿ ಕುರಿ ಮೇಯಿಸುತ್ತಿದ್ದ ಹುಡುಗ. ಆರನೇ ಕ್ಲಾಸನ್ನು ಏರಲಾಗಲಿಲ್ಲ. ಕೂಲಿಗಾಗಿ ಮಂಗಳೂರು, ಗೋವಾ, ಕೇರಳಗಳಿಗೆ ವಲಸೆ. ಮರ ಕತ್ತರಿಸೋದರಲ್ಲಿ ಎಕ್ಸ್ಪರ್ಟ್. ರಬ್ಬರ್ ಹಾಲು ಶೇಖರಿಸೋದರಲ್ಲಿ ಬಹಳ ವೇಗ. ಹಿಡಿದ ಕೆಲಸಗಳಲ್ಲೆಲ್ಲಾ ಅಚ್ಚುಕಟ್ಟು. ಹೀಗಿರುವಾಗ ಅದೊಂದು ಹುಚ್ಚು ಹಿಡಿಯಿತು. ರೆಸ್ಲಿಂಗಿನದು. ಸಮಯ ಸಿಕ್ಕಾಗಲೆಲ್ಲಾ ಯೂಟ್ಯೂಬ್ ತೆರೆದು ರೆಸ್ಲಿಂಗ್ ವೀಕ್ಷಣೆ. ಅದರದೇ ಗುಂಗು. ಭಾರತೀಯ ಮೂಲದ ಗ್ರೇಟ್ ಕಲಿ ಈ ಯುವಕನಿಗೆ ದೇವರಾದ. ದಿನದ ಕೂಲಿಗಾಗಿ ದುಡಿಯುತ್ತಿದ್ದ ಯುವಕನಿಗೀಗ ತಾನೂ ಫೈಟಿಂಗ್ ಮಾಡಬೇಕು, ಆಡಬೇಕೆಂಬ ಆಸೆ. ಗ್ರೇಟ್ ಕಲಿಯ ಅಕಾಡೆಮಿಯೊಂದು ದೆಹಲಿಯಲ್ಲಿರೋದು ಗೊತ್ತಾಗಿ ರೈಲು ಹತ್ತಿಯೇ ಬಿಟ್ಟ.

ವಸತಿ, ತರಬೇತಿ, ಆಹಾರ. ಎಲ್ಲವೂ ಸೇರಿದರೆ ತಿಂಗಳಿಗೆ ರೂ. 40,000 ಬೇಕಾಗುತ್ತೆ. ಈ ವರೆಗಿನ ಸಂಪಾದನೆಯ ಉಳಿತಾಯ ಮತ್ತು ಸ್ನೇಹಿತರ ಸಹಾಯದಿಂದ ಎರಡು ತಿಂಗಳ ಕಾಲ ದೆಹಲಿಯಲ್ಲಿ ಇರಬಹುದು. ಮುಂದೇನು? ಅಲ್ಲಿ ನೆರವು, ಭರವಸೆ ದೊರೆಯಲಿಲ್ಲ. ನಿರಾಸೆಯಿಂದ ಊರಿಗೆ ಮರಳಿದ. ಉದ್ಯೋಗ ಅರಸಿ ಉಡುಪಿಗೆ ಬಂದ. ಎಂ.ಜಿ.ಎಂ ಕಾಲೇಜಿನಲ್ಲಿ ಸಪೋರ್ಟ್ ಸ್ಟಾಫ್ ಆಗಿ ಕೆಲಸ ಪಡೆದ. ಮತ್ತೆ ಕನಸು ಗರಿಗೆದರಿತು. ಈ ಬಾರಿ ರೆಸ್ಲಿಂಗಲ್ಲ. ಬಾಕ್ಸಿಂಗು.

ಮಣಿಪಾಲದ ಜಿಮ್ ಒಂದರ ಬಾಗಿಲು ತಟ್ಟಿದ. ಬಾಕ್ಸಿಂಗ್ ತರಬೇತುದಾರರನ್ನೂ ಹುಡುಕಿದ. ಆದರೆ ಬಲು ದುಬಾರಿ. ಊರ ಮನೆಯ ಖರ್ಚಿನ ಜವಾಬ್ದಾರಿ ಹೆಗಲ ಮೇಲಿದೆ. ಬಹಳ ಕಷ್ಟ. ಆಗ ಅಲೆವೂರಿನ ವಿರಾಜ್ ಅನ್ನುವವರ ಬಗ್ಗೆ ತಿಳಿಯಿತು. ತರಬೇತಿ ಶುಲ್ಕವೂ ಕೈಗೆಟುಕುವಂತದ್ದು. ಅಲ್ಲಿಂದ ಶುರುವಾಯ್ತು ಬಾಕ್ಸಿಂಗ್ ಪಯಣ. ಬೆಂಗ್ಳೂರನ್ನೂ ಮುಟ್ಟಿ ಕಂಚಿನ ಬಹುಮಾನ ಪಡೆಯಿತು.

ಯಮನೂರ ತನ್ನ ನಿತ್ಯ ಕೆಲಸದೊಂದಿಗೆ ಬೆಳಿಗ್ಗೆ ಅಥವಾ ಸಂಜೆ ತರಬೇತಿಗಾಗಿ ಅಲೆವೂರಿಗೆ ಹೋಗುತ್ತಿದ್ದ. ಲಾಕ್ ಡೌನ್, ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ತರಬೇತಿಗೆ ತೆರಳಲು ಸಾಧ್ಯವಿಲ್ಲ. ಆಸಕ್ತಿ ಕುಗ್ಗಲಿಲ್ಲ. ಬಾಕ್ಸಿಂಗ್ ಕಿಟ್ಟು, ಬ್ಯಾಗು ಕೊಂಡುಕೊಳ್ಳುವಷ್ಟು ಹಣವಿಲ್ಲ. ಕೊನೆಗೆ ದೊಡ್ಡ ಟೈರೊಂದನ್ನು ತಂದು, ಅದಕ್ಕೆ ಹಗ್ಗ ಕಟ್ಟಿ ಮರದ ಗೆಲ್ಲೊಂದಕ್ಕೆ ಸಿಕ್ಕಿಸಿ ಪ್ರ್ಯಾಕ್ಟೀಸ್. ದಿನದ ಕೆಲಸ ಮುಗಿದದ್ದೇ ತಡ ಯಮನೂರ ಬಾಕ್ಸಿಂಗ್ ಕಣಕ್ಕೆ ಇಳಿದಾಗುತ್ತೆ. ಒಂಟಿ ಪ್ರಯತ್ನ ಮುಂದುವರೆಯುತ್ತೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಆಟವಾಡುವ ಆಸೆಯಾಗುತ್ತದೆ. ದಿನಗೂಲಿ ನೌಕರನಿಗಿದು ಸಾಧ್ಯವಾ ಅಂತ ಸಂಶಯವೂ ಬರುತ್ತದೆ.

ಇಂತಹ ಪ್ರತಿಭೆಗೊಂದು ಅವಕಾಶ ಸಿಗಬೇಕಲ್ವೇ? ಕೆಲಸ ಬಿಟ್ಟು ಬಾಕ್ಸಿಂಗನ್ನೇ ದಿನವಿಡೀ ಕಲಿಯುವ, ರಾಷ್ಟ್ರ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ತರಬೇತಿ ಸಿಕ್ಕರೆ ನಮ್ಮವನೊಬ್ಬ ಕ್ರೀಡಾ ಸಾಧಕನಾದ ಹೆಮ್ಮೆ. ದೆಹಲಿಯಲ್ಲೆಲ್ಲ ಅತ್ಯುತ್ತಮ ಟ್ರೈನಿಂಗ್ ಸೆಂಟರುಗಳಿವೆಯಂತೆ. ಸರಿಯಾದ‌ ಮಾರ್ಗದರ್ಶನ, ನೆರವು ಸಿಕ್ಕರೆ ಇಂದು ಪೊರಕೆ ಹಿಡಿದಿರುವ ಯಮನೂರನ ಕೈಗಳು ಬಾಕ್ಸಿಂಗ್ ಗ್ಲಾಸು ಧರಿಸಿ ದೇಶ, ವಿದೇಶಗಳಲ್ಲಿ ಮಿಂಚುವ ದಿನಗಳು ಬರಬಹುದು.

ಯಮನೂರಪ್ಪನ ಕನಸಿಗೆ ರೆಕ್ಕೆ ಕಟ್ಟುವವರಿದ್ದರೆ ದಯವಿಟ್ಟು ತಿಳಿಸಿ.

writer: ಮಂಜುನಾಥ್ ಕಾಮತ್

Tags: boxertoofan
ನ್ಯೂಸ್‌ ನಾಟೌಟ್‌ ಪ್ರತಿನಿಧಿ

ನ್ಯೂಸ್‌ ನಾಟೌಟ್‌ ಪ್ರತಿನಿಧಿ

Next Post
ಈಕೆ 12 ವರ್ಷದಲ್ಲೇ ಒಲಿಂಪಿಕ್ಸ್ ಸ್ಪರ್ಧಿ, ಪ್ರತಿಯೊಬ್ಬ ಹೆಣ್ಣು ಓದಲೇಬೇಕು ಸ್ಫೂರ್ತಿ ಕಥೆ

ಈಕೆ 12 ವರ್ಷದಲ್ಲೇ ಒಲಿಂಪಿಕ್ಸ್ ಸ್ಪರ್ಧಿ, ಪ್ರತಿಯೊಬ್ಬ ಹೆಣ್ಣು ಓದಲೇಬೇಕು ಸ್ಫೂರ್ತಿ ಕಥೆ

Leave a Reply Cancel reply

Your email address will not be published. Required fields are marked *

Categories

© 2021 Newsnotout | Website Developed By serverhug.

No Result
View All Result
  • ಮುಖಪುಟ
  • ನಮ್ಮಲ್ಲೇ ಫಸ್ಟ್
  • ಸುದ್ದಿ-ಜಗತ್ತು
    • ಕರಾವಳಿ
    • ಕೊಡಗು
    • ಬೆಂಗಳೂರು
    • ರಾಜ್ಯ
    • ದೇಶ-ಪ್ರಪಂಚ
  • ಕರಾವಳಿ
  • ಕೊಡಗು
  • ಬೆಂಗಳೂರು
  • ಕ್ರೀಡೆ/ಸಿನಿಮಾ
  • ಕ್ರೈಂ
  • ಜೀವನಶೈಲಿ

© 2021 Newsnotout | Website Developed By serverhug.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In